ಅನ್ನಪೂರ್ಣಾ
ಪಾರ್ವತಿದೇವಿಯ ಅನೇಕ ಸ್ವರೂಪಗಳಲ್ಲಿ ಒಂದು. ಈಕೆ ಕಾಶೀವಿಶ್ವನಾಥೇಶ್ವರನ ಹೆಂಡತಿ. ಈ ದೇವಿಯನ್ನು ಸ್ತುತಿಸುವುದರಿಂದ ಅನ್ನಸಮೃದ್ಧಿಯೂ ಸಂಪದಭಿವೃದ್ಧಿಯೂ ಸೌಖ್ಯವೂ ಉಂಟಾಗುತ್ತದೆಯೆಂದು ಹೇಳುತ್ತಾರೆ. ಅನ್ನಪೂರ್ಣಾದೇವಿಯ ಸ್ತೋತ್ರವನ್ನು ಶ್ರೀ ಶಂಕರಾಚಾರ್ಯರು ರಚಿಸಿರುತ್ತಾರೆ.						
    
(ಎಸ್.ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ